Home Stay

About Kodachadri:

Kodachadri  is the  one of the spectacular location in Karnataka. Also known as “DakshinaKashi”  ( kashi in south) which is situated  at 4215m above the  sea level.  Kodachadri is the second ” scenic trekking Everest ”  in  Karnataka. It has the Parvatheshvara temple which is the origin place of  the  kollur Mookambika temple. Nearer to this temple Shankaracharya’s  peetha  (stone hall) is located and it is called  as “Sarvajna peetha”. In addition to this, place has an iron pillar  as one of the story says that it was used as weapon by goddess mookambika  in order to kill mookasura.  This Iron pillar didn’t get rusty even after crossing the age column of centuries.

Wathing  sunrise,sunset and full moon by sitting over here is a great experience. Amidst of  surrounding forest, hills and mountains , dew drops ;it seems  to be  touching  the sky by hands(feels like being  in paradise).

Important Places  to Watch in Kodachadri are,

  • Origin Point of Chakrateertha River( First Place to get  on road to Kodachadri. Origin of the River is from the time of Ramayan).
  • Dibbanagal Mountain.
  • Mugilupete (Shooting Place of the Famous Kannada movie Gaalipata).
  • Parvatheshvara Temple( Comprise of 4 temples).
  • Venkataraya Durga( Sunrise spot).
  • Guha Ganapati Temple in Cave.
  • Sarvajna Peetha (Shankaracharya’s Meditated Place).
  • Agastya Teertha.(Stream of Fresh  Sweet Water).
  • Chitramoola (Origin Place of Sowparnika River).
  • Sunset Point.

NOTE: Jeep facility available

Kodachadri  Hallimane Home Stay:

“Kodachadri  Hallimane Home Stay”  is the fully furnished and accommodated home-stay(cottage)especially  made for  the  tourists , located in the serene beauty of the Kattinahole village. Four years ago,  the house is renovated as cottage  which is of  around 500-600 years old reflects the ancient culture .  Homestay is having the modern facilities. It’s located 380km from Bangalore, 110km from Shimogga and 42km from kollur. Surrounded by the greenery, Areca nut farms, paddy fields, hills and mountains, flora and fauna, fresh streams of water.

Kodachadri Hallimane Homestay provides  4 rooms and 3 halls for the tourists. For the tourists willing to experience the     hospitality of Malenadu we provide clean and tasty food and also food items   like Holige(pancake), varieties of Papad, Lemon-rice, Chapathi, Pulihora, Salad  will be provided.  We provide the other types of agricultural products and arrage the vehicle facilities at a discount rates if informed earlier. Package trip and guide facilities for all surrounding places are also available.

Places Near by Kodachadri Hallimane homestay are,

  • Kodachadri – 9 KM
  • Hidlumane Falls – 14 KM
  • Kollur – 32 KM
  • Sigandur – 48 KM
  • Shivappanayaka Fort, Nagara – 20 KM
  • Sri Ramachandrapura Matha – 35 KM
  • Chakra Dam – 25 KM
  • Shambhulingeshvara Temple
  • Gowriteertha( Bubble’s Pond).

NOTE: Jeep facility available


 

ಕೊಡಚಾದ್ರಿಯ ಬಗ್ಗೆ:

ಕರ್ನಾಟಕದ ರಮಣೀಯ ತಾಣಗಳಲ್ಲೊಂದು ಕೊಡಚಾದ್ರಿ. ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಕೊಡಚಾದ್ರಿಯು ಸಮುದ್ರ ಮಟ್ಟದಿಂದ 4215 ಮೀ. ಎತ್ತರದಲ್ಲಿದೆ. ಕರ್ನಾಟಕದಲ್ಲೇ ಎರಡನೇ ಎತ್ತರದ “ರಮಣೀಯ ಚಾರಣದ ಶಿಖರ”. ಕೊಲ್ಲೂರು ಮೂಕಾಂಬಿಕೆಯ ಮೂಲಸ್ಥಾನವಾದ ಕೊಡಚಾದ್ರಿಯಲ್ಲಿ  ಪರ್ವತೇಶ್ವರ ದೇವಾಲಯವಿದೆ. ಅಲ್ಲಿಂದ ಇನ್ನೂ ಸ್ವಲ್ಪ ದೂರ ಮೇಲೆ ಸಾಗಿದರೆ   ಆದಿಶಂಕರಾಚಾರ್ಯರ ಕಲ್ಲಿನ ಮಂಟಪವಿದೆ, ಇದನ್ನು ಸರ್ವಜ್ಞ ಪೀಠ ಎನ್ನುತ್ತಾರೆ. ಇಲ್ಲಿ ಕುಳಿತು ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಹಾಗೂ ಹುಣ್ಣಿಮೆಯ ರಾತ್ರಿ ಚಂದ್ರನನ್ನು ನೋಡುವುದೇ ಒಂದು ಅದ್ಭುತ ಅನುಭವ. ಸುತ್ತ ಮುತ್ತಲಿರುವ ಕಾಡು, ಬೆಟ್ಟ ಗುಡ್ಡಗಳ ಮಧ್ಯೆ, ಮಂಜಿನ ಹನಿಗಳ ಮೇಲೆ ನಿಂತರೆ ಆಕಾಶವೇ (ಸ್ವರ್ಗವೇ!!) ಕೈಗೆ ಸಿಗುವುದೋ ಎಂಬಂತೆ ಭಾಸವಾಗುತ್ತದೆ! ಇಲ್ಲಿರುವ ಇನ್ನೊಂದು ವಿಶೇಷವೆಂರೆ ಶ್ರೀ ದೇವಿಯು ಮೂಕಾಸುರನನ್ನು ವಧಿಸಲು ಬಳಸಿದಳೆಂದು ಪ್ರತೀತಿ ಇರುವ ನಿಂತಿರುವ ಕಬ್ಬಿದ ಸ್ತಂಭ. ಈ ಸ್ತಂಭವು ಯುಗ ಯುಗಳಿಂದ ಗಾಳಿ, ಮಳೆ, ಬಿಸಿಲಿಗೆ ಮೈಯ್ಯೊಡ್ಡಿ ನಿಂತಿದ್ದರೂ ಸ್ವಲ್ಪವೂ ತುಕ್ಕು ಹಿಡಿದಿಲ್ಲ.

ಕೊಡಚಾದ್ರಿಯಲ್ಲಿ ನೋಡುವ ಪ್ರಮುಖ ಸ್ಥಳಗಳು:

  • ಚಕ್ರತೀರ್ಥ ನದಿಯ ಉಗಮ ಸ್ಥಾನ. (ರಸ್ತೆ ಮಾರ್ಗದಲ್ಲಿ ಮೊಟ್ಟ ಮೊದಲು ಸಿಗುವ ಸ್ಥಳ, ಇದು ರಾಮಾಯಣ ಕಾಲದಿಂದಲೇ ಇದೆ)
  • ದಿಬ್ಬಣಗಲ್ ಪರ್ವತ (3200 ಮೀ. ಎತ್ತರದ ಮೊದಲ ಬೆಟ್ಟ )
  • ಮುಗಿಲು ಪೇಟೆ  (ಗಾಳಿಪಟ ಸಿನಿಮಾದ ಶೂಟಿಂಗ್ ಮಾಡಿದ ಸ್ಥಳಗಳು)
  • ಪರ್ವತೇಶ್ವರ ದೇವಾಲಯ (ಈ ಪರಿಸರದಲ್ಲಿ ಒಟ್ಟು ನಾಲ್ಕು ದೇವಸ್ಥಾನಗಳಿವೆ)
  • ವೆಂಕಟರಾಯನ ದುರ್ಗ (ಇಲ್ಲಿಂದ ಅತ್ಯಭುತವಾದ ಸೂರ್ಯೋದಯ ನೋಡಬಹುದು)
  • ಗುಹಾ ಗಣಪತಿ (ಅತ್ಯಂತ ಪುರಾತನ ಗುಹೆ ಮತ್ತು ದೇವಾಲಯ)
  • ಸರ್ವಜ್ಞ ಪೀಠ (ಆದಿ ಶಂಕರಾಚಾರ್ಯರಿಂದ ನಿರ್ಮಿತ)
  • ಅಗಸ್ತ್ಯ ತೀರ್ಥ (ಪರಿಶುದ್ಧ ನೀರು ಅತಿ ಎತ್ತರದಿಂದ ಧುಮುಕುವ ಇಲ್ಲಿ ಸ್ನಾನ ಮಾಡಬಹುದು)
  • ಚಿತ್ರಮೂಲ (ಸೌಪರ್ಣಿಕಾ ನದಿಯ ಮೂಲಸ್ಥಾನ)
  • ಸೂರ್ಯಾಸ್ತ ನೋಡುವ ಸ್ಥಳ.
ಸೂಚನೆ: ಜೀಪ್ ಸೌಲಭ್ಯ ಲಭ್ಯವಿದೆ

ಕೊಡಚಾದ್ರಿ ಹಳ್ಳಿಮನೆ ಹೋಂಸ್ಟೇ

ಕೊಡಚಾದ್ರಿಗೆ ಹೋಗಿ ಬರುವ ಪ್ರವಾಸಿಗರಿಗಾಗಿ ಕೊಡಚಾದ್ರಿ ಬೆಟ್ಟದ ತಪ್ಪಲಿನಲ್ಲೇ ಇರುವ ಕಟ್ಟಿನಹೊಳೆ ಎಂಬ ಸುಂದರ ಹಳ್ಳಿಯಲ್ಲಿ ಪ್ರವಾಸಿಗರಿಗೆ ಉಳಿದುಕೊಳ್ಳಲೆಂದೇ ಇರುವ ಸುಸಜ್ಜಿತ ವಸತಿ ವ್ಯವಸ್ಥೆ ಕೊಡಚಾದ್ರಿ ಹಳ್ಳಿಮನೆ ಹೋಂಸ್ಟೇ. ಸುಮಾರು 500-600 ವರ್ಷಗಳಷ್ಟು ಪುರಾತನವಾದ ಮನೆಯಲ್ಲಿ 4 ವರ್ಷಗಳ ಹಿಂದೆ ಪ್ರಾರಂಭಗೊಂಡ ಮೂಡಲ ಮನೆಯಂತಿರುವ ಹೋಂಸ್ಟೇ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ ಇದು ಬೆಂಗಳೂರಿನಿಂದ 380 ಕೀ. ಮೀ., ಶಿವಮೊಗ್ಗದಿಂದ 110 ಕೀ. ಮೀ. ಮತ್ತು ಕೊಲ್ಲೂರಿನಿಂದ 42 ಕೀ. ಮೀ. ದೂರದಲ್ಲಿದೆ. ಹಚ್ಚ ಹಸುರಿನ ಅಡಿಕೆ ತೋಟ, ಬತ್ತದ ಗದ್ದೆ, ಬೆಟ್ಟ ಗುಡ್ಡ, ತಿಳಿ ನೀರಿನ ತೋರೆಗಳ ನಡುವೆ ಇರುವ ನಮ್ಮ ಕೊಡಚಾದ್ರಿ ಹಳ್ಳಿಮನೆ ಹೋಂಸ್ಟೇ ವಸತಿಯಲ್ಲಿ ಪ್ರವಾಸಿಗರು ಉಳಿದುಕೊಳ್ಳಲು ಸುಸಜ್ಜಿತವಾದ 4 ಬೆಡ್ ರೂಂ ಗಳು ಮತ್ತು 3 ಹಾಲ್ ಗಳು ಇವೆ. ಮಲೆನಾಡಿನ ಅತ್ಮೀಯ ಆಥಿತ್ಯ ಬಯಸುವ ಪ್ರವಾಸಿಗರಿಗೆ ಹೋಳಿಗೆ, ಹಪ್ಪಳ, ಚಿತ್ರಾನ್ನ, ಚಪಾತಿ, ಪುಳಿಯೋಗರೆ, ಕೋಸಂಬರಿ ಮತ್ತಿತರ ಬಗೆ ಬಗೆಯ ಪದಾರ್ಥಗಳು ಹಾಗೂ ಸಾವಯವ ಕೃಷಿ ಪದಾರ್ಥಗಳ ಮಿಶ್ರಣದೊಂದಿಗೆ ಶುಚಿ ರುಚಿಯಾದ ಊಟ-ಉಪಹಾರಗಳು, ಜೊತೆಗೆ ವಾಹನದ ಸೌಲಭ್ಯ ಮುಂತಾದವುಗಳನ್ನು ಮುಂಚಿತವಾಗಿ ತಿಳಿಸಿದಲ್ಲಿ ರಿಯಾಯಿತಿ ದರದಲ್ಲಿ ವ್ಯವಸ್ಥೆ ಮಾಡಿಕೊಡಲಾಗುವುದು. ಪ್ರವಾಸಿಗರಿಗೆ ಗೈಡ್ಸ್ ಹಾಗೂ ಪ್ಯಾಕೇಜ್ ವ್ಯವಸ್ಥೆಯಲ್ಲಿ ಪೂರ್ಣ ಸ್ಥಳಗಳನ್ನು ತೋರಿಸಿಕೊಂಡು ಬರಲಾಗುವುದು.

ಕೊಡಚಾದ್ರಿ ಹಳ್ಳಿಮನೆ ಹೋಂಸ್ಟೇಗೆ ಸಮೀಪದಲ್ಲಿರುವ ಇತರ ಕೆಲವು ಪ್ರೇಕ್ಷಣೀಯ ಸ್ಥಳಗಳು:

  • ಕೊಡಚಾದ್ರಿ – 9 ಕಿ.ಮೀ.
  • ಹಿಡ್ಲುಮನೆ ಫಾಲ್ಸ್ – 14 ಕಿ.ಮೀ.
  • ಕೊಲ್ಲೂರು – 32 ಕಿ.ಮೀ.
  • ಸಿಗಂದೂರು – 48 ಕಿ.ಮೀ.
  • ನಗರ ಶಿವಪ್ಪ ನಾಯಕನ ಕೋಟೆ – 20 ಕಿ.ಮೀ.
  • ಶ್ರೀ ರಾಮಚಂದ್ರಾಪುರ ಮಠ – 35 ಕಿ.ಮೀ.
  • ಚಕ್ರಾ ಡ್ಯಾಂ (ಶರಾವತಿ ಹಿನ್ನೀರಿನ ಪ್ರದೇಶ) – 26 ಕಿ.ಮೀ.
  • ಶಂಭುಲಿಂಗೇಶ್ವರ ದೇವಸ್ಥಾನ – ಸಂಪೇಕಟ್ಟೆಯಿಂದ ಕೊಡಚಾದ್ರಿಗೆ ಹೋಗುವ ಮಾರ್ಗಮಧ್ಯದಲ್ಲಿದೆ.
  • ವೇದಪಾಠಶಾಲೆ
  • ಗೌರಿತೀರ್ಥ (ಬೇರೆಲ್ಲೂ ಕಾಣಸಿಗದ ಅತಿ ವಿಶೇಷವಾದ ನೀರ್ಗುಳ್ಳೆಗಳ ಕೊಳ)
ಸೂಚನೆ: ಜೀಪ್ ಸೌಲಭ್ಯ ಲಭ್ಯವಿದೆ